ನಿಮ್ಮ ಮತ ನಿಮ್ಮ ಭವಿಷ್ಯ

ವಿಜಯ ಸಂಘರ್ಷ 
ಮುಂಬರುವ 18ನೇ ಲೋಕಸಭಾ ಚುನಾವಣೆಯಲ್ಲಿ ದೇಶದ ಬೆನ್ನೆಲುಬಾದ ಯುವಜನತೆ ನಿಜವಾಗಿ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ತರದ ಆಮಿಷವನ್ನು ಬಿಟ್ಟು ಮತದಾನ ಮಾಡಿದಾಗ ನಿಜವಾಗಿ ಪ್ರಜಾಪ್ರಭುತ್ವಕ್ಕೆ ಅರ್ಥ ಸಿಗುವುದು. ಈ ಬಾರಿ ಸುಮಾರು 97 ಕೋಟಿ ಜನ ವಿವಿಧ ಹಂತಗಳಲ್ಲಿ ಮತದಾನ ಮಾಡುತ್ತಿದ್ದಾರೆ.

  ಮೊದಲಿನಂತೆಯೇ ಕೂಲಿ ಕಾರ್ಮಿಕರು, ರೈತರು, ಬಡವರು ಇನ್ನಿತರರು ಹಾಗೆಯೇ ಇದ್ದಾರೆ . ಆದರೆ ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ, ಅನಕ್ಷರತೆ, ಮಹಿಳೆಯರ ಸುರಕ್ಷತೆಯ ವಿಚಾರ, ಜಾತಿ ಮತ್ತು ಧರ್ಮದ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

  ಯಾವುದೇ ಆಮಿಷಕ್ಕೆ ಒಳಗಾಗದೆ, ತಮ್ಮ ಸ್ವಂತ ಆಲೋಚನೆಯಿಂದ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮತದಾನ ಮಾಡಬೇಕು. ಜನರು ಮುಂದಿನ 5 ವರ್ಷದ ನಂತರ, ಮತದಾನ ಮಾಡಿರುವುದರಿಂದ ತೃಪ್ತಿಪಡೆಯಬೇಕು ಹೊರತು ಪಶ್ಚಾತ್ತಾಪ ಆಗಬಾರದು. ಉತ್ತಮ ಮನಸ್ಥಿತಿಯುಳ್ಳ ನಾಯಕನನ್ನು ಆರಿಸುವ ಮೂಲಕ ತಮ್ಮ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸುವರ್ಣ ಅವಕಾಶ ನಮ್ಮ ಮುಂದೆಯೇ ಇದೆ.
 
ಆದ್ದರಿಂದ ನಮ್ಮೆಲ್ಲರ ಮುಂದಿನ ಭವಿಷ್ಯಕ್ಕೆ ಈಗ ಚುನಾವಣೆಯಲ್ಲಿ ಮಾಡುವ ಮತದಾನವೇ ಮೂಲ, ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಉತ್ತಮ ನಾಯಕನನ್ನು ಆಯ್ಕೆ ಮಾಡಿ ಸದೃಢ ದೇಶವನ್ನು ಕಟ್ಟೋಣ. 


        ಸಂಜಯ್.ಡಿ
       ತೃತೀಯ ಬಿ.ಎ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಮನೆ ಭದ್ರಾವತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು