ವಿಜಯ ಸಂಘರ್ಷ
ಭದ್ರಾವತಿ: ನಗರದ ಹೊಸ ಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಶೇ.100ರಷ್ಟು ಹಾಗೂ ಕನ್ನಡ ಮಾಧ್ಯಮ ಶೇ.93 ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಉನ್ನತ ಶ್ರೇಣಿಯಲ್ಲಿ 6, ಪ್ರಥಮ ದರ್ಜೆಯಲ್ಲಿ 30 ವಿದ್ಯಾರ್ಥಿ ಗಳು ತೇರ್ಗಡೆಗೊಂಡಿದ್ದಾರೆ. ಆಂಗ್ಲ ವಿಭಾಗದಲ್ಲಿ ವಿ.ವಸಂತ್- 594, ಎಂ. ವರ್ಷಿಣಿ-580, ಬ್ಯೂಲಾ ಸುಪ್ರೀತಿ- 579, ಎಚ್.ಎಸ್. ದೀಪ-535, ಐಮಾನ್ ತಸ್ಮಿಯ-533, ಎಂ.ಎಂ ಪ್ರೀತಮ್-533, ವಿ. ದೀಪಶ್ರೀ-520, ಕೆ.ಆರ್ ಗ್ರೀಷ್ಮ-515 ಅಂಕಗಳನ್ನು ಕನ್ನಡ ವಿಭಾಗದಲ್ಲಿ ಡಿಕ್ಯಾನಾಯ್ಕ- 509, ಕೀರ್ತನಾ-495, ಬಿ.ಎಂ ಶೋಷಿತಾ- 486 ಮತ್ತು ಎಸ್. ನಿಸರ್ಗ- 485 ಅತಿ ಹೆಚ್ಚು ಅಂಕಗಳನ್ನು ಪಡೆದು ಕೊಂಡಿದ್ದಾರೆ.
ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹಾಗು ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಿಕ್ಷಕ ವೃಂದಕ್ಕೆ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ಅಧ್ಯಕ್ಷ ಬಿ.ಸಿದ್ದಬಸಪ್ಪ, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಖಜಾಂಜಿ ಎಸ್.ಕೆ ಮೋಹನ್ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ
ಡಾ.ಎಸ್.ಪಿ ರಾಕೇಶ್ ಹಾಗೂ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.