ಸ್ವಯಂ ಉದ್ಯೋಗದಿಂದ ಸದೃಢ ಸಮಾಜ ನಿರ್ಮಾಣ: ಆರ್‌.ಟಿ.ಓ ಮಲ್ಲಿಕಾರ್ಜುನ್

ವಿಜಯ ಸಂಘರ್ಷ 
ಕೆ ಆರ್ ಪೇಟೆ: ಯುವ ಜನತೆ ಸ್ವಾವಲಂಬಿಯಾಗಿ ಸ್ವಯಂ ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಿದರೆ ಸದೃಢ ಸಮಾಜ ನಿರ್ಮಾಣ ನಿಶ್ಚಯ ಎಂದು ಸಮಾಜ ಸೇವಕ ಆರ್‌.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ಕೆ.ಬಿ ಈಶ್ವರಪ್ರಸಾದ್ ಕಟ್ಟಡದ ಮಳಿಗೆ ಯಲ್ಲಿ ಬಂಡಿಹೊಳೆ ಗ್ರಾಮದ ಅನಿಲ್ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡ ಅನಿಲ್ ಒಪೊ ಮೊಬೈಲ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು. 

ಈಗಿನ ಬಹುತೇಕ ಯುವ ಜನತೆ ಸರ್ಕಾರಿ ಕೆಲಸಕ್ಕಾಗಿ ತಮ್ಮಲ್ಲಿ ಅಡಗಿರುವ ಅಮೂಲ್ಯ ವಾದ ಆಲೋಚನೆ ಪ್ರತಿಭೆ ಮತ್ತು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸದ ಪ್ರಯತ್ನದ ಜೊತೆಗೆ ಯುವ ಪೀಳಿಗೆ ಪ್ರಮುಖವಾಗಿ ಸ್ವಾವಲಂಬಿ ಯಾಗಿ ಸ್ವಯಂ ಉದ್ಯೋಗದ ಕಡೆಗೆ ಹೆಚ್ಚು ಮಹತ್ವ ನೀಡಿದರೆ ಯುವಕರ ಭವಿಷ್ಯವು ಉಜ್ವಲವಾಗಿ ಮತ್ತು ಸಮಾಜದ ನಡೆಯು ಕೂಡ ಉತ್ತಮ ವಾಗಿರುತ್ತದೆ. ಆ ಮಾದರಿಯಲ್ಲೇ ಕಾಯಕವೇ ಕೈಲಾಸ ಎಂಬುದನ್ನು ಜಗತ್ತಿಗೆ ಸಾರಿದ ವಿಶ್ವಗುರು, ಜಗಜ್ಯೋತಿ ಬಸವೇಶ್ವರ ಜಯಂತಿ ದಿನದಂದು ಅನಿಲ್ ಮೊಬೈಲ್ಸ್ ಅಂಗಡಿಯನ್ನು ಪ್ರಾರಂಭಿಸಿರುವುದು ಬಹಳ ಸಂತೋಷದ ಸಂಗತಿ. 

ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯ ಬಂಡಿಹೊಳೆ ದರ್ಶನ್,ಹಿರಿಯ ಮುಖಂಡರಾದ ನಲ್ಲಿ ಶಿವರಾಮೇಗೌಡ, ಮಂಜೇಗೌಡ, ಬೈರೇಗೌಡ, ಪೊಲೀಸ್ ವೈರಮುಡಿ ಗೌಡ, ಯುವ ಮುಖಂಡರಾದ ಸಾಧುಗೋನಹಳ್ಳಿ ಲೊಕೇಶ್, ಬಂಡಿಹೊಳೆ ಕಾರ್ತಿಕ್, ಶರತ್, ಯುವರಾಜ್, ಸುನೀಲ್, ಶಶಿ ಕುಮಾರ್, ಅವಿನಾಶ್,ಕುಶಾಲ್, ಕೋದಂಡ, ದೃತೀಸ್,ಮುರುಳಿ ಪ್ರವೀಣ್,ಲೋಹಿತ್, ಶ್ರೀಕಾಂತ್ ಆಕಾಶ್ ಮತ್ತಿತರಿದ್ದರು.

(*✍️ಮನು ಮಾಕವಳ್ಳಿ ಕೆ ಆರ್ ಪೇಟೆ*)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು