ಎಂಪಿಎಂ ಆಕ್ರಮಿಸಿಕೊಂಡ ದಲಿತರ ಜಮೀನು: ದಸಂಸ ದಿಂದ ಆಹೋರಾತ್ರಿ ಧರಣಿ

ವಿಜಯ ಸಂಘರ್ಷ 
ಭದ್ರಾವತಿ: ದಲಿತರ ಭೂಮಿಯನ್ನು ಎಂಪಿಎಂ ನವರು ಆಕ್ರಮಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ. 

ಹೊಳೆಹೊನ್ನೂರು ಸಮೀಪದ ಚಂದನಕೆರೆ ಗ್ರಾಮದ ಸರ್ವೇ ನಂ. 12/ಎ ಬ್ಲಾಕ್ ನಲ್ಲಿ ಸುಮಾರು 28 ಎಕರೆ ಭೂಮಿಯನ್ನು ಅರದೋಟ್ಲು ಗ್ರಾಮದ 14 ಜನರಿಗೆ 1960-61ರಲ್ಲಿ ದಲಿತರಿಗೆ ಸಾಗುವಳಿ ನೀಡಿದ್ದು, ಇದರಲ್ಲಿ ಹತ್ತಿ, ಹುರುಳಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುತ್ತಿದ್ದರು ಎಂದು ಅಂದಿನ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ದೃಡೀಕರಿಸಿದ್ದಾರೆ.

ದಲಿತರು 1985-86 ರವರೆಗೆ ಸಾಗುವಳಿ ಮಾಡುತ್ತಾ ಬಂದಿದ್ದು, ಕೆಲ ವರ್ಷಗಳ ನಂತರ ಅನಕ್ಷರಸ್ತ ಹಾಗೂ ಅಸಹಾಯಕ ದಲಿತರನ್ನು ಹೆದರಿಸಿ ದೌರ್ಜನ್ಯದಿಂದ ಎಂಪಿಎಂ ನವರು ನೀಲಗಿರಿ ನೆಡುತೋಪು ಮಾಡಿ. ದಲಿತರು ಭೂಮಿಯ ಮೇಲೆ ಹೋಗದಂತೆ ಮಾಡಿದ್ದಾರೆ. ಇದರ ವಿರುದ್ದ ಸರ್ಕಾರದ ಜೊತೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡುತ್ತಲೇ ಬರುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜವಿಲ್ಲ. 

ದಿನನಿತ್ಯ ಕಚೇರಿಗೆ ಅಲೆದಾಡುವುದೆ ಜೀವನವಾಗಿದೇ. ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಜಂಟಿ ಸರ್ವೇ ಕಾರ್ಯ ನಡೆಸಿ, ಸರ್ಕಾರದಿಂದ ದಲಿತರಿಗೆ ಮಂಜೂರಾದ ಭೂಮಿಯನ್ನು ಹಸ್ತಾಂತರಿ ಸುವರೆಗೂ ಅನಿರ್ದಿಷ್ಠಾವಧಿ ಆಹೋರಾತ್ರಿ ದರಣಿ ನಡೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದರು.

ಸರ್ಕಾರದಿಂದ ನೀಲಿಗಿರಿ ಮರ ಬೆಳೆಯುವುದನ್ನು ನಿಷೇಧಿಸಿದ್ದರು ಈ ಭಾಗದಲ್ಲಿ ಎಂಪಿಎಂ ನಮ್ಮ ಜಮೀನನಲ್ಲಿ ನೀಲಗಿರಿಯನ್ನು ಬೆಳೆಯುತ್ತಿದ್ದು, ತಕ್ಷಣವೇ ಸರ್ಕಾರ ಎಚ್ಚೆತ್ತು ಇದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಸಂಚಾಲಕರಾದ ಹನುಮಂತಪ್ಪ, ನವೀನ್ ಕುಮಾರ್, ದೇವರಾಜ್, ಮಲ್ಲೇಶ್, ರಂಗಪ್ಪ, ದೇವರಾಜ, ಹರೀಶ್, ಸಂಗನಾಥ, ಪರಮೇಶ್, ಧನಂಜಯ, ಚೌಡಪ್ಪ, ಹನುಮಂತಪ್ಪ, ಮಂಜಪ್ಪ, ರತ್ನಮ್ಮ ಸೇರಿದಂತೆ ಇತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು