ವಿಜಯ ಸಂಘರ್ಷ
ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಎಂ.ಬಿ ರತಿ ಶ್ರೀಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿ ಹಿಂದಿನ ಅಧ್ಯಕ್ಷರಾಗಿದ್ದ ಸುಂದ್ರಮ್ಮ ಮಂಜೇಗೌಡ ಅವರ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಹರಿಹರಪುರ ಎಂ.ಬಿ ರತಿ ಶ್ರೀಧರ್ ಹೊರತುಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅಂತಿಮವಾಗಿ ಎಂ.ಬಿ ರತಿ ಶ್ರೀಧರ್ ಅವರನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ಘೋಷಿಸಿದರು.
ಗ್ರಾ.ಪಂ ಸದಸ್ಯ ಹಾಗೂ ವಕೀಲರಾದ ಬೊಮ್ಮನಹಳ್ಳಿ ಹರ್ಷ ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲ ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ, ನಿಮ್ಮ ಆಡಳಿತ ಅವಧಿಯಲ್ಲಿ ಪಕ್ಷಾ ಬೇದ ಮರೆತು ಅಭಿವೃದ್ಧಿ ಕಾರ್ಯಗಳ ಕೈಗೊಳ್ಳಬೇಕು ಹಾಗೂ ಗ್ರಾ.ಪಂ.ಗೆ ಇಂದು ನೇರವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದೆ. ಗ್ರಾಮಗಳ ಸಮಗ್ರ ಅಭಿವದ್ಧಿಯ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷೆ ಎಂ.ಬಿ ರತಿ ಶ್ರೀಧರ್ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರ ನೀಡಿದ ನಮ್ಮ ಪಂಚಾಯತಿ ಎಲ್ಲಾ ಸದಸ್ಯರು ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನನ್ನ ಆಡಳಿತ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳು, ಜಾನುವಾರು ನೀರು ಕುಡಿಯುವ ತೊಟ್ಟಿ, ಜಾನುವಾರು ಕೊಟ್ಟಿಗೆ ಹಾಗೂ ಕೆರೆ-ಕಟ್ಟೆ ಅಭಿವೃದ್ಧಿ ಇದರ ಜೊತೆಗೆ ಸರ್ಕಾರ ಇಲಾಖೆಯಿಂದ ಬರುವ ಸವಲತ್ತು ಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಿ,ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತ ನನ್ನ ಅಧಿಕಾರದ ಅವಧಿ ಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿ ಗಳಿಗೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಎಂ.ಬಿ ರತಿ ಶ್ರೀಧರ್ ಅವರನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಕಾಂಗ್ರೆಸ್ ಮುಖಂಡ ಡಾ:ಕೆ ಸಿ ಶ್ರೀಕಾಂತ್ ಸೇರಿದಂತೆ ನೂರಾರು ಬೆಂಬಲಿಗರು ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಬಲರಾಮೇಗೌಡ ಸದಸ್ಯರಾದ ಬೊಮ್ಮನಹಳ್ಳಿ ಲತಾ,ಆಶಾ, ದೇವಮ್ಮ, ಜಯಮಣಿ, ಕುಸುಮ, ಹೆಚ್. ಎನ್ ಹರಿಚಂದ್ರ, ದೇವರಾಜು, ಸುಂದ್ರಮ್ಮ, ಜಯರಾಮೇಗೌಡ, ಬಿ ಗಣೇಶಗೌಡ, ಟಿ. ಆರ್ ನಂದೀಶ್, ಸರೋಜಮ್ಮ, ಕತ್ರಘಟ್ಟ ಎಂ.ಕೆ ಪ್ರಸನ್ನ ಕುಮಾರ್, ವಿಜಯ, ನಾಗೇಗೌಡ, ನರಸಿಂಹಮೂರ್ತಿ, ಎಸ್.ಡಿ ರುಕ್ಮಿಣಿ, ಹಿರಿಯ ಮುಖಂಡರಾದ ಹೆಚ್.ವೈ ಜಯಕುಮಾರ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಕುರ್ನೆನಹಳ್ಳಿ ನವೀನ್ ಕುಮಾರ್ ,ದೀಪಕ್, ಕತ್ರಘಟ್ಟ ಮಹೇಶ್, ಪ್ರದೀಪ್,ರೇವಣ್ಣ,ಸಿದ್ದಲಿಂಗೇಗೌಡ,ದೀಪಕ್, ಮಂಜುನಾಥ್, ಅ.ತಿ ಶ್ರೀನಿವಾಸ್, ಮಾಡುವಿನಕೋಡಿ ನಾಗೇಶ್,ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಅಯಾಜ್ ಷರೀಫ್,ದೀಪು, ಹೊಸಹೊಳಲು ಅನಿಲ್, ಕೊಮ್ಮೆನಹಳ್ಳಿ ಅನಿಲ್, ಸುನಿಲ್,ಸೇರಿದಂತೆ ಉಪಸ್ಥಿತರಿದ್ದರು.
(ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)