**ನಾನೇಕೆ ಬರೆಯುತ್ತೇನೆ**

ವಿಜಯ ಸಂಘರ್ಷ 
ಬೇಸರಿಕೆ ಆಸರಿಕೆ ಏನಿರಲಿ
ಎಲ್ಲಕ್ಕೂ ಜೊತೆ ಕಾವ್ಯ ಕನ್ನಿಕೆ
ಮನಸಾರೆ ಮೈದುಂಬಿ ಬರಲಿ
ನನ್ನೊಳಗೆ ಆವಿರ್ಭಸುವಾಕೆ

ಕವಿತೆ ಎಂದರೆ ನನ್ನ ಸುರಭಿ
ಗೀಚುವ ಪದಗಳಿಗಿಲ್ಲ ಪರಿಧಿ
ಅಂತರಂಗದಲಿಹ ಆ ಬೇಗುದಿ
ವಿಸ್ತ್ರುತವಾಗುವುದೇ ಪದದಿ

ಕೊನೆಯಿಲ್ಲದ ಕಲಿಕೆಯೊಳು
ಕೊನೆಯಾಗದಿರಲಿ ಅಕ್ಕರಗಳು
ಅಕ್ಷಯವಾಗಲಿ ಪುಟಪುಟಗಳು
ತಿರುವಿದಷ್ಟು ಬಾಳು ಬೆಳದಿಂಗಳು.

ಭಾವನೆಗಳ ಭವಸಾಗರದಿ ನಾನು
ಬರವಣಿಗೆಯಲ್ಲೇ ಮೀಯುತ್ತೇನೆ
ಬದುಕಿನೆಲ್ಲ ಬವಣೆಗಳ ಆ ಕಾನು
ಉಪೇಕ್ಷಿಸಲು ಶ್ರಮಿಸುತ್ತಲೇ ಇದ್ದೇನೆ

ಪ್ರತಿಭೆಯ ಸಾರ ಚಿಮ್ಮಿ ಹೊಮ್ಮಿರಲು
ತಡೆಯೊಡ್ಡಿದೆ ಅಡೆತಡೆಗೆ ಅಂಕೆಯಿರದೆ
ರೀತಿ ರಿವಾಜುಗಳ ಎಲ್ಲೆ ಮೀರಿರಲು
ಅಜ್ಞಾತವಾಸಕ್ಕೆ ನಾಂದಿಯ ಹಾಡಿದೆ 

, ✍️ಮಾಲಾ ಚೆಲುವನಹಳ್ಳಿ

1 ಕಾಮೆಂಟ್‌ಗಳು

ನವೀನ ಹಳೆಯದು