ಡಿ.ದೇವರಾಜ ಅರಸು ರವರ ಪ್ರೋತ್ಸಾಹ ಜನಪರ ಹೋರಾಟಗಳಿಗೆ ಪ್ರೇರಣೆ: ಆರ್.ವೇಣುಗೋಪಾಲ್

ವಿಜಯ ಸಂಘರ್ಷ 
ಭದ್ರಾವತಿ: ಅಂದಿನ ಮುಖ್ಯಮಂತ್ರಿ 
ಡಿ. ದೇವರಾಜ ಅರಸು ರವರ ಪ್ರೇರಣೆಯ ಮೂಲಕ ಸಾಮಾಜಿಕ ಹೋರಾಟ ಆರಂಭಿಸಲಾಯಿತು ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣು ಗೋಪಾಲ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 40 ವರ್ಷಗಳಿಂದ ಸಮಾಜಸೇವಾ ಕಾರ್ಯಗಳ ಮೂಲಕ ರಾಜಕಾರಣಕ್ಕೆ ಪಾದರ್ಪಣೆ ಮಾಡಿದ ಹಿನ್ನಲೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅನೇಕ ಜನಪರ ಕೆಲಸಗಳು ಪ್ರೋತ್ಸಾಹ ನೀಡಿವೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆಗೆ, ವಿವಿಧ ಸಂಘ-ಸಂಸ್ಥೆಗಳಿಗೆ, ಜನ ಪ್ರತಿನಿಧಿ ಗಳಿಗೆ ಹಾಗು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮುಂದಿನ ಹೋರಾಟಗಳಿಗೆ ಪೂರಕವಾಗುವಂತೆ ಹಾಗು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುವುದಾಗಿ ಅವರು ತಿಳಿಸಿದರು.

ನಿರಂತರ ಹೋರಾಟ ಪತ್ರವ್ಯವಹಾರ ಗಳ ಮನವಿ ಸಲ್ಲಿಸಿದ ಫಲವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನ ಗೊಂಡಿವೆ. ಜನ್ನಾಪುರದಲ್ಲಿ ಬೋರ್‌ ವೆಲ್‌ಗಳನ್ನು ಆಳವಡಿಸಿ ನೀರಿನ ಸಮಸ್ಯೆ, ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಕಾರ್ಯಗಳ ಅನುಷ್ಠಾನಕ್ಕೆ ಕಾರಣ ರಾಗುವ ಮೂಲಕ ಕ್ಷೇತ್ರದ ಲಕ್ಷಾಂತರ ಜನರ ಅನುಕೂಲಕ್ಕೆ ಕಾರಣ ರಾಗಿದ್ದೇವೆ ಎಂದರು.

ರಾಜ್ಯದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಯವರಿಗೆ ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದ ಆರ್. ಮೋಹನ್ ಹಾಗೂ ಅಧಿಕಾರಿ ವರ್ಗದವರು ಜಿಲ್ಲಾಡಳಿತ, ತಾಲೂಕು ಆಡಳಿತ ದೊಂದಿಗೆ ನಗರದ ಸುಮಾರು 40ಕ್ಕೂ ಅಧಿಕ ಕೊಳಚೆ ಪ್ರದೇಶಗಳಲ್ಲಿ ಮೂರು ದಿನಗಳ ಪಾದಯಾತ್ರೆ ಮೂಲಕ ಖುದ್ದಾಗಿ ಸಮಸ್ಯೆಗಳನ್ನು ಅರಿತು ಇದರಲ್ಲಿ 37 ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಲು ಶ್ರಮಿಸಿದ್ದು, ಕಾರಣಾಂತರದಿoದ 3 ಕೊಳಚೆ ಪ್ರದೇಶಗಳು ಕೈಬಿಟ್ಟು ಹೋಗಿವೆ. ಈ ಸಂಬಂಧ ಹೋರಾಟ ಮುಂದುವರೆಸ ಲಾಗುತ್ತಿದೆ ಎಂದರು.

ನಮ್ಮ ಹೋರಾಟದ ಫಲವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರಾದ್ಯಂತ ರಾಷ್ಟ್ರೀಯ ಕೊಳಚೆ ಪ್ರದೇಶ ಅಭಿವೃದ್ಧಿ ಯೋಜನೆ (ಎನ್.ಎಸ್.ಡಿ.ಪಿ) ನ್ಯಾಷನಲ್ ಸ್ಲಂ ಡೆವೆಲೆಪ್‌ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ನಿರ್ಮಲ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಕ್ಷೇತ್ರದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ.

ಬ್ರಾಹ್ಮಣರು, ಮೊದಲಿಯಾರ್, ಆರ್ಯವೈಶ್ಯ, ಶ್ವೇತಾಂಬರ, ನಾಯರ್, ಜನಾಂಗದವರಿಗೆ ಇ.ಡಬ್ಲೂ.ಎಸ್ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಸರ್ಕಾರ ದೊಂದಿಗೆ ಪತ್ರವ್ಯವಹಾರ ನಡೆಸಿದ ಹಿನ್ನಲೆ ಇಂದು ಆದಾಯ ಮತ್ತು ಜಾತಿ ಪ್ರಮಾಣಪತ್ರಗಳು ದೊರೆಯು ವಂತಾಗಿದೆ ಎಂದರು.

ಅಮೃತ್ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಪ್ರಧಾನಮಂತ್ರಿಯವರ ಸರ್ವರಿಗೂ ಸೂರು ಯೋಜನೆಯಡಿ ನಗರದಲ್ಲಿ 2048 ಫಲಾನುಭವಿಗಳಿಗೆ ಜಿ+3 ಗುಂಪು ಮನೆ ನಿರ್ಮಾಣ ಹೀಗೆ ಹಲವಾರು ಯೋಜನೆಗಳು ಜಾರಿಗೊಳ್ಳುತ್ತಿವೆ.

ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಪುನಶ್ಚೇತನ ಗೊಳಿಸುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರ ಅವರನ್ನು ಬೆಂಬಲಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪ್ರಮುಖರಾದ ರಮಾ ವೆಂಕಟೇಶ್, ಉಮಾ ರಮೇಶ್, ಗೀತಾ ರವಿ, ರಾಧ ಗೋಪಿ, ಶೈಲಜಾ ರಾಮಕೃಷ್ಣ, ಗೀತ ತಿರುಮಲಗೌಡ ಇನ್ನಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು