ವಿಶ್ವಗುರು ಬಸವಣ್ಣರವರ ತತ್ವಾದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ವಿಜಯ ಸಂಘರ್ಷ 
ಶಿವಮೊಗ್ಗ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಮಹಾ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ವನ್ನು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಚರಿಸಲಾಯಿತು. 

ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ನಾವೆಲ್ಲ ವಿಶ್ವಗುರು ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಗುರುತರ ಹೊಣೆಗಾರಿಕೆ ನಮ್ಮದಾಗಿದೆ ಎಂದರು. 

ಶಶಾಂತ ಆನಂದ್, ಭಾರತಿ ಚಂದ್ರಶೇಖರ, ಕಿರಣ್ ದೇಸಾಯಿ, ಪೂಜಾ ನಾಗರಾಜ್ ಪರಿಸರ ವಚನ ಗಾಯನ ನಡೆಸಿಕೊಟ್ಟರು. 

ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಪ್ರಮುಖರಾದ ಎಸ್ ಪಿ ದಿನೇಶ್, ಬಳ್ಳಕೆರೆ ಸಂತೋಷ್,ರೋಟರಿ 
ಜಿ ವಿಜಯ್ ಕುಮಾರ್, ಡಾ.ನಾಗರಾಜ್ ಪರಿಸರ, ಎ ಎಸ್ ಚಂದ್ರಶೇಖರ್ ಇನ್ನಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು