ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕನ್ನಡ ಸಾಹಿತ್ಯ ವಿಶಾಲ ವಾದದ್ದು ದೇಶದ ಪ್ರಾಚೀನ ಭಾಷೆ ಗಳಲ್ಲಿ ಮೂರನೇ ಸ್ಥಾನ, ವಿಶ್ವದಲ್ಲಿ 29ನೇ ಸ್ಥಾನ ಪಡೆದು ರಾಜ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಸೋಮವಾರ ನಗರದ ಲೋಕೋಪ ಯೋಗಿ ಇಲಾಖೆಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯ ಕರ್ತರ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ರಾಜ್ಯದಲ್ಲಿ ಎಲ್ಲೆಡೆ ಪರಭಾಷಿಗರಿಂದ ಕೂಡಿದ್ದು, ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಪರ್ಯಾಸ. ಇಂದು ಕನ್ನಡ ಮಾಧ್ಯಮ ಶಾಲೆಗಳತ್ತ ಮುಖ ಮಾಡದೆ ಆಂಗ್ಲ ಭಾಷೆ ಆವರಿಸುತ್ತಿದೆ. ಇಂದಿನ ಮಕ್ಕಳಿಗೆ ಆಂಗ್ಲ ಭಾಷೆ ಆಡು ಭಾಷೆಯಾಗಿ ಮಾರ್ಪಡುತ್ತಿದೆ. 69 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಕನ್ನಡ ಉಳಿಸುವ ಯತ್ನ ಮಾಡುತ್ತಿದ್ದು, ರಕ್ಷಣಾ ವೇದಿಕೆಯ ನಾರಾಯಣ ಗೌಡರ ಬಣ ಮುಂಚೂಣಿಯಲ್ಲಿದೆ. ಇಂತಹ ಸಂಘಟನೆಗಳಿಂದ ಕನ್ನಡ ಉಳಿದಿದೆ. ಕನ್ನಡದ ಅಭಿವೃದ್ಧಿಗೆ ಕನ್ನಡ ಸಂಘಟನೆಗಳ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ. ಜ್ಯೋತಿ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಕಟ್ಟಾಳು ಟಿ.ನಾರಾಯಣಗೌಡ ನೇತೃತ್ವದಲ್ಲಿ ಇಂದು ರಕ್ಷಣಾ ವೇದಿಕೆ ನಿರಂತರ ಹೋರಾಟದ ಮೂಲಕ ಉಳಿವಿಗಾಗಿ ಪ್ರಯತ್ನ ಮಾಡುತ್ತಿದೆ. ಮಹಿಳಾ ಘಟಕಕ್ಕೆ ನೂತನ ವಾಗಿ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಯಾದ ನೇತ್ರಾ ರವರನ್ನು ಆತ್ಮೀಯ ವಾಗಿ ಸಂಘಟನೆ ಬರಮಾಡಿಕೊಂಡು ಅಭಿನಂದಿಸಿದರು.
ನ್ಯೂಟೌನ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭಾರತಿ ಮಹಿಳೆಯರು ಸೈಬರ್ ಕ್ರೈಮ್ ವಂಚನೆ, ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಮಾತನಾಡಿದರು.
ನಗರಸಭಾ ಸದಸ್ಯರಾದ ಬಸವರಾಜ್ ಬಿ ಆನೆಕೊಪ್ಪ, ಪಲ್ಲವಿ ಸೇರಿದಂತೆ ಅನೇಕರು ಮಾತನಾಡಿದರು. ವೇದಿಕೆಯಲ್ಲಿ ರಕ್ಷಣಾ ವೇದಿಕೆಯ ಪ್ರಮುಖರಾದ ಮಹೇಶ್ವರಿ, ಶಾರದಾ, ಪ್ರಶಾಂತ್ ಸೇರಿದಂತೆ ಅನೇಕರಿದ್ದರು. ಶಕುಂತಲಾ ಪ್ರಾರ್ಥಿಸಿ, ಗೀತಾ ನಿರೂಪಿಸಿದರು.
ಇದೆ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾ ಕಾರ್ಯದರ್ಶಿ ಆಯ್ಕೆಯಾದ ನೇತ್ರಾರವರನ್ನು ಕನ್ನಡ ಬಾವುಟ ನೀಡಿ ಸ್ವಾಗತಿಸಲಾಯಿತು.