ವೈದ್ಯಕೀಯ ಇಲಾಖಾ ನೌಕರರ ಸಂಘದ ಸ್ನೇಹ ಸಮ್ಮಿಲನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಆಶ್ರಯದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈಚೆಗೆ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸಿ ಸೋತವರು, ಗೆದ್ದವರು ಒಂದೇ ವೇದಿಕೆಯಲ್ಲಿ ಚುನಾವಣೆಯ ಕಹಿ ನೆನಪುಗಳನ್ನು ಮರೆತು ಸಂಘಟನೆ ಯನ್ನು ಬಲಪಡಿಸುವ ಬಗ್ಗೆ ಮಾತನಾಡಿದ್ದು ಸಭೆಗೆ ಮೆರಗೂ ತಂದಿತ್ತು. 

ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ನೇಹ ಸಮ್ಮಿಲನದಲ್ಲಿ ಬಿಗುಮಾನವನ್ನು ಮರೆತು ತಮ್ಮ ಎಲ್ಲಾ ರೀತಿಯ ಸಹಕಾರವನ್ನು ನೀಡಿ ಕಾರ್ಯಕ್ರಮ ಯಶಸ್ವಿಗೆ ಕಾರಣ ಕರ್ತರಾದರು. 

ಹೀಗೆ ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ಇಂತಹ ಕಾರ್ಯಕ್ರಮಗಳು ಆದಲ್ಲಿ ಸಂಘಟನೆ ಬಲಗೊಂಡಲ್ಲಿ ಇಲಾಖೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳ ಬಹುದೆಂಬ ಮಾತುಗಳು ಕೇಳಿಬಂದವು. 

ವೈದ್ಯಕೀಯ ತಾಲೂಕು ಸಂಘದ ಅಧ್ಯಕ್ಷೆ ಸುಶೀಲಬಾಯಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಟರಾಜ್, ಹಿರಿಯ ಅಧಿಕಾರಿಗಳಾದ ಡಾ.ಗುಡದಪ್ಪ, 
ಡಾ.ನಾಗರಾಜ ನಾಯ್ಕ,ಡಾ. ಓ. ಮಲ್ಲಪ್ಪ, ಡಾ.ಶಂಕರಪ್ಪ, ಡಾ ನಾಗೇಶ್, ಡಾ.ಕಿರಣ್, ಡಾ.ವೆಂಕಟೇಶ್, ಡಾ.ಅಶೋಕ್, ಡಾ.ಅಚ್ಯುತ್, ಡಾ.ಗಿರೀಶ್,ಡಾ.ಗಾಯಿತ್ರಿ, ಜಿಲ್ಲಾಧ್ಯಕ್ಷ ವೈ.ಜೆ.ಶಶಿಕುಮಾರ್, ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್, ಜಿಲ್ಲಾ ಖಜಾಂಚಿ ನರಸಿಂಹ, ವಿಜಯ್ ಆಂಟೋ ಸಗಾಯಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಉಪಾಧ್ಯಕ್ಷ ರಮೇಶ್ ಮ.ಸ. ನಂಜುಂಡ ಸ್ವಾಮಿ  ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು