ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ : ವಾಹನಗಳನ್ನು ಕೊಳ್ಳುವ ಮುನ್ನ ಕಾಯ್ದೆ ಕಾನೂನು ತಿಳಿದು ಕೊಳ್ಳುವ ಅವಶ್ಯಕತೆಯಿದೆ. ಅದರ ಕಾಯ್ದೆ, ಕಾನೂನು ತಿಳಿದುಕೊಂಡ ಬಳಿಕವಷ್ಟೇ ವಾಹನ ಕೊಂಡು ಚಲಾಯಿಸಿ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.
ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ನಗರ ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸ ಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಅದರಲ್ಲೂ ಯುವಕ- ಯುವತಿಯರು ನಿಯಾಮವಳಿಗಳನ್ನು ಪಾಲನೆ ಮಾಡುವುದರ ಮೂಲಕ ವಾಹನ ಚಲಾವಣೆಗೆ ಮುಂದಾಗ ಬೇಕು. ಪರವಾನಿಗಿ ಇದ್ದರಷ್ಟೇ ವಾಹನ ಚಲಾಯಿಸಬೇಕು. ರಸ್ತೆ ನಿಯಾಮಾ ವಳಿ ಮತ್ತು ಪರವಾನಿಗೆ ಹೊಂದ ಬಳಿಕವಷ್ಟೇ ವಾಹನ ಚಲಾಯಿಸ ಬೇಕೆಂದು ಕಿವಿ ಮಾತು ಹೇಳಿದರು.
ಇನ್ನು 18 ವರ್ಷ ವಯಸ್ಸಿನೊಳಗೆ ಇರುವವರು ಯಾರೂ ಕೂಡ ವಾಹನ ಚಲಾಯಿಸ ಬಾರದು. ಪರವಾನಿಗೆ ಇದ್ದವರು ವಾಹನ ಚಲಾಯಿಸ ಬೇಕಾದಲ್ಲಿ ಎಲ್ಲಾ ದಾಖಲೆಗಳು ಹೊಂದಿರಬೇಕು. ನಮ್ಮ ದಾರಿಯಲ್ಲಿ ನಾವು ಸರಾಗವಾಗಿ ಸಾಗಿದರೆ, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ.
ಎಲ್ಲರೂ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು. ಮಕ್ಕಳು ಕೂಡ ಹೆಲ್ಮೆಟ್ ಧರಿಸಿಯೇ ವಾಹನದಲ್ಲಿ ಸಾಗಬೇಕು. ಇತರರಿಗೂ ವಾಹನ ಚಲಾವಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್, ಇದರಲ್ಲಿ ಹೊಸತನವಿದೆ.
ಜೀವನದಲ್ಲಿ ಹೊಸತನ ಕಲಿಯ ಬೇಕು. ಹಾಗೆ ನಾನು ಸ್ಕೌಟ್ಸ್ ಸೆಲ್ಯೂಟ್ ಬಗ್ಗೆ ಇಂದು ತಿಳಿದುಕೊಂಡಿದ್ದೇನೆ. ಬಹಳಷ್ಟು ಧೈರ್ಯ ಶಾಲಿಗಳಾಗಲು ಈ ರೀತಿಯ ಕೈಕುಲುಕುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇವೆ ಸಲ್ಲಿಸುತ್ತಾರೆ. ಪ್ರತಿದಿನ ಕಲಿಕೆ ಎಂಬುದು ಇರುತ್ತದೆ. ಇಲ್ಲಿ ಸೆಲ್ಯೂಟ್ ಬಗ್ಗೆ ಕಲಿಕೆ ಉತ್ತಮ ಪ್ರಯೋಜನಕಾರಿ ಯಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕಲೆ ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಮತ್ತು ಬುಲ್ ಬುಲ್ಸ್ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಕೌಟ್ ಆಯುಕ್ತ ಎಸ್.ಜಿ. ಆನಂದ್, ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ರೋವರ್ ಜಿಲ್ಲಾ ಆಯುಕ್ತ ಕೆ. ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ ಕುಮಾರ್, ಚಂದ್ರಶೇಖರ್, ಚೂಡಾಮಣಿ ಪವಾರ್, ಡಿ.ವೈಎಸ್.ಪಿ.ಸಂಜೀವ್ ಕುಮಾರ್, ಸಂಚಾರಿ ಇನ್ಸ್ ಪೆಕ್ಟರ್ ಸಂತೋಷ್. ರಾಜೇಶ್ ಅವಲಕ್ಕಿ. ಶಿವಶಂಕರ್. ಮಲ್ಲಿಕಾರ್ಜುನ್ ಖಾನೂರ್. ಗೀತಾ ಚಿಕ್ಕಮಠ. ವೈ ಆರ್ ಕಾರ್ಯದರ್ಶಿ ಚಂದ್ರಶೇಖರ್,ಕಾತ್ಯಾಯಿನಿ. ರಾಮಚಂದ್ರ ಸೇರಿದಂತೆ ಇತರರಿದ್ದರು