ಸ್ತ್ರಿ ಪ್ರತಿಯೊಂದು ರಂಗದಲ್ಲೂ ಸಹ ಸಾಬೀತಾಗಿದ್ದಾಳೆ: ವಿನೋದಾ ಕೆ.ಮೂರ್ತಿ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಒಬ್ಬ ಸ್ತ್ರೀ ತೊಟ್ಚಿಲು ತೂಗೋದು, ಪಾತ್ರೆ ತೊಳೆಯೋದು ಅಷ್ಟೇ ಅಲ್ಲ, ಪ್ರತಿಯೊಂದು ಅಭಿನಯದಲ್ಲೂ, ರಂಗದಲ್ಲೂ ಸಹ ಇದ್ದಾಳೆ ಅನ್ನೋದನ್ನು ಸಾಬೀತು ಪಡಿಸುವುದಕ್ಕೆ ಶಂಕರಘಟ್ಟದ ಶ್ರೀಶಾ ಕಲಾ ವೇದಿಕೆ ಒಂದು ನಿದರ್ಶನ ವಾಗಿದೆ ಎಂದು ಭಜನಾ ಗಾಯಕಿ, ಕವಯಿತ್ರಿ ವಿನೋದಾ ಕೆ.ಮೂರ್ತಿ ಹೇಳಿದರು.

ಶಂಕರಘಟ್ಟದ ಶ್ರೀಶಾ ಕಲಾ ವೇದಿಕೆ ಹಾಗೂ ಶಿವಮೊಗ್ಗದ ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಇವರ ಸಹಯೋಗದಲ್ಲಿ ಶಂಕರಮಠ ಸಭಾಂಗಣದಲ್ಲಿ ಸಂಕ್ರಾಂತಿ ಪ್ರಯುಕ್ತ ಸುಗ್ಗಿ ಸಂಭ್ರಮ-2025 ಕಾರ್ಯಕ್ರಮ ದಲ್ಲಿ ಮಾತನಾಡಿದರು. 

ಭಜನಾ ನಿರತರಾಗಿದ್ದ ನಾವು ಇಂದು ಹಾಡು, ನೃತ್ಯ, ಕವನ ವಾಚನ ಹೀಗೆ ವೈವಿಧ್ಯಮಯವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಅವಕಾಶ ನೀಡಿದ ಶ್ರೀಶಾ ಕಲಾ ವೇದಿಕೆಗೆ ಸ್ನೇಹ ಪೂರ್ವಕವಾದ ಧನ್ಯವಾದಗಳು ಎಂದು ಅಧ್ಯಕ್ಷಿಯ ನುಡಿಯಲ್ಲಿ ತಿಳಿಸಿದರು.  

ಶಂಕರಮಠದ ಕಾರ್ಯ ಸಮಿತಿಯ ಸದಸ್ಯ ಕೇಶವಮೂರ್ತಿ ಮಾತನಾಡಿ, ಸಂಕ್ರಾಂತಿ ಹಬ್ಬ ಅಂದ್ರೆ ಮಹಿಳೆಯರ ಹಬ್ಬ. ಹಿಂದಿನ ಕಾಲದಲ್ಲಿನ ಹಬ್ಬಗಳ ಸಂಭ್ರಮವೇ ಬೇರೆ. ಪ್ರತಿಯೊಂದು ಮಕ್ಕಳೂ ಸುಂದರವಾಗಿ ಅಲಂಕಾರ ಮಾಡಿಕೊಂಡು ಸಾಯಂಕಾಲ ಆಯ್ತು ಅಂದ್ರೆ ಎಲ್ಲರ ಮನೆಗಳಿಗೂ ಹೋಗಿ ಎಳ್ಳು ಬೀರುವುದನ್ನು ನೋಡುವುದಕ್ಕೆ ಒಂದು ಸಂತಸವಾಗುತ್ತಿತ್ತು. ಆ ಸಂಭ್ರಮ ಈಗ ಮರೆಯಾಗಿರುವುದಕ್ಕೆ ಬೇಸರದ ಸಂಗತಿ ಎಂದರು. 

ಶ್ರೀಶಾ ಕಲಾ ವೇದಿಕೆಯ ಸಂಸ್ಥಾಪಕಿ ಆಶಾ ಶ್ರೀಧರ್ ಮಾತನಾಡಿ, ನೂರು ನೆಲ್ಲ ಚೆಲ್ಲಿದರೆ ರಾಶಿ ಮಾಡುವ, ಒಂದೇ ಒಂದು ಬೀಜದಿಂದ ದೊಡ್ಡ ಮರವಾಗಿ, ಬಳ್ಳಿಯಾಗಿ ತುಂಬ ಹಣ್ಣು ನೀಡುವ, ಕಾಯಿಗಳನ್ನು ನೀಡುವಭೂತಾಯಿಯ ಕರುಣೆ ಮಹಿಮೆ ಅಪಾರ. ತಾನು ಬೆಳೆದ ಬೆಳೆ ಕೈ ಸೇರಿದಾಗ ರೈತರಿಗೆ ಸುಗ್ಗಿ. ನೇಗಿಲು ಹಿಡಿದು ಹೊಲದಲ್ಲಿ ಹಗಲು ರಾತ್ರಿ ಎನದೆ ಬೆವರು ಸುರಿಸಿ ಬೆಳೆದ ಬೆಳೆಗೆ ಹಾಗೂ ಒಂದು ಭಾಗವಾಗಿರುವ ರಾಸುಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಆಚರಿಸುವ ಹಬ್ಬ ಸಂಕ್ರಾಂತಿ. ಬೆಳೆಗಳ ಸುಗ್ಗಿಯ ಕ್ರಾಂತಿಗೆ ಹಿಗ್ಗಿ ಹುಗ್ಗಿ ನೈವೇದ್ಯ ಮಾಡಿ ಎಳ್ಳು ತಿಂದು ಓಳ್ಳೇ ಮಾತಾಡಿ ಎಂದು ಹಾರೈಸುವ ಹಬ್ಬ ಎಂದರು.

ಅಲ್ಲದೆ ಸ್ವಾಮಿ ವಿವೇಕಾನಂದರ ಜಯಂತಿಯೂ ಸಹ ಇಂದೇ ಆಗಿದ್ದು, ಅವರ ನುಡಿಯಂತೆ ಏಳಿ ಎದ್ದೇಳಿ, ಎಚ್ಚರಗೊಳ್ಳಿ ಎಂಬ ವಾಕ್ಯವು ಇಂದಿನ ಯುವಜನತೆಗೆ ಮಾನಸಿಕಗಿಂತ ದೈಹಿಕವಾಗಿ ಎಚ್ಚರಗೊಳಿಸ ಬೇಕಾಗಿ ರೋದು ವಿಪರ್ಯಾಸ. ಆದರೂ ಓಂದು ಯುವವರ್ಗ ಈಗಿನ ಪರಿಸ್ಥಿತಿ ಗಳನ್ನು ಎಚ್ಚರಗೊಳ್ಳುತ್ತಿರುವುದು ಒಂದು ಆಶಾ ಕಿರಣ ಮೂಡಿಸಿದೇ. ತಾನು ತನ್ನದು ಎನ್ನುವುದ ಬಿಟ್ಟು ಖಾವಿಯ ತೊಟ್ಟು ದಿವ್ಯ ಸಂದೇಶ ಗಳಿಂದ ಭಾರತದ ಸಂಸ್ಕೃತಿ ಎತ್ತಿ ಹಿಡಿದ, ಭಾರತದ ದಿವ್ಯ ಚೇತನರ ಆದರ್ಶಗಳನ್ನು ಅಳವಡಿಸಿಕೊಂಡು ನಮ್ಮ ಜೀವನವನ್ನು ಬದಲಾಯಿಸಿ ಕೊಳ್ಳೋಣ ಎಂದರು.

ಕು.ನಮಸ್ಯ ಸ್ವಾಗತ ನೃತ್ಯ ಪ್ರದರ್ಶಿಸಿ ದರೆ, ಆಶಾ ಶ್ರೀಧರ್ ಹಾಗೂ ಪದ್ಮಜಾ ಜಾನಪದ ನೃತ್ಯ ಮಾಡಿದರು. ಕನಕ, ರಾಜಲಕ್ಷ್ಮಿ, ಭಾರತಿ, ಲಕ್ಷ್ಮೀ, ವಿನೋದ, ಆಶಾಮೂರ್ತಿ, ಸುಮತಿ ಕಾರಂತ್ ಹಾಗೂ ಅಚಿಂತ್ಯ ಭಜನಾ ಮಂಡಳಿಯ ಮಹಿಳಾ ಸದಸ್ಯರಿಂದ ಜಾನಪದ ಗೀತೆ, ಭಕ್ತಿಗೀತೆ, ಕವನ ವಾಚನವನ್ನು ಪ್ರಸ್ತುತ ಪಡಿಸಿದರು.

ಶಾಂತಾಲಕ್ಷ್ಮೀ ಪ್ರಾರ್ಥಿಸಿ, ಶಾರದಾ ಗುಂಡೂರಾವ್ ಸ್ವಾಗತಿಸಿದರೆ, ಆಶಾ ಕೆ. ಮೂರ್ತಿ ನಿರೂಪಿಸಿದರು. ಶ್ರೀಶಾ ಕಲಾ ವೇದಿಕೆಯ ಸಂಸ್ಥಾಪಕಿ ವಂದಿಸಿದರು. 

ಮಠದ ಅರ್ಚಕರಾದ ಮಂಜುನಾಥ್ ಭಟ್, ಕೀರ್ತನ್ ಬಟ್, ಸಮಿತಿಯ ಕಾಶಿಪತಿ ಅಲಸೇ, ಕೃಷ್ಣ ಮೂರ್ತಿ, ಉಮೇಶ್ ಸಿ. ಎನ್. ಸಿರಿಗನ್ನಡ ವೇದಿಕೆಯ ಶ್ರೀಧರ್,ಕಿರಣ್, ಸುಹಾಸ್ ಆರ್.ಎಸ್. ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು