ಬೀದಿ ನಾಯಿ ಹಾವಳಿ: ಕ್ರಮಕ್ಕೆ ಶಶಿಕುಮಾರ್ ಗೌಡ ಆಗ್ರಹ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಗ್ರಾಮ ಹಾಗೂ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಯಿಂದ ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣ ವಾಗಿದ್ದು ಕೂಡಲೇ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಒತ್ತಾಯಿಸಿದರು. 

ಅವರು ಬುಧವಾರ ತಾಲೂಕು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿ, ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ, ಸಾರ್ವಜನಿಕರು ಹಾಗೂ ಶಾಲೆ ಮಕ್ಕಳಿಗೆ ನಾಯಿಗಳು ಒಡಾಡಿಸಿ ಕಚ್ಚಿ ಗಾಯಗೊಂಡ ಪ್ರಕರಣ ದಿನೇ ದಿನೇ ಹೆಚ್ಚಾಗಿದೆ. 

ನಗರಸಭಾ ವ್ಯಾಪ್ತಿಯಲ್ಲಿ ನಾಯಿ ಕಡಿತಕ್ಕೆ ಐದು ಸಾವಿರ ಹಣ ನೀಡುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿ ಕಡಿತ ವ್ಯಕ್ತಿಗಳಿಗೂ ಹಣ ಬಿಡುಗಡೆ ಮಾಡಲು ಕಾರ್ಯ ನಿರ್ವಾಹಕ ಅಧಿಕಾರಿಗಳು ಸಂಬಂಧ ಪಟ್ಟ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಬೇಕೆಂದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೆಂಕಟೇಶ್ ಸಂಕ್ಲಿಪುರ, ವಿಜಯ್ ಕುಮಾರ್ ದೊಡ್ಡೇರಿ, ಈಶ್ವರ್ ದೊಡ್ಡೇರಿ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು