ಭದ್ರಾವತಿ-ಶ್ರೀ ಸಿದ್ದಾರೂಢ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

 ವಿಜಯ ಸಂಘರ್ಷ ನ್ಯೂಸ್ 



ಭದ್ರಾವತಿ: ಶ್ರೀ ಸಿದ್ದಾರೂಢರ 190ನೇ ಜಯಂ ತ್ಯುತ್ಸವ ಹಾಗೂ ಶ್ರೀ ಗುರುನಾಥಾ ರೂಢರ 115ನೇ ಜಯಂತ್ಯುತ್ಸವ, ಶ್ರೀ ಸಿದ್ದಾರೂಢ ಕಥಾಮೃತ ಗ್ರಂಥದ ಶತಮಾನೋತ್ಸವ ಅಂಗವಾಗಿ ಹುಬ್ಬಳಿಯ ಶ್ರೀ ಸಿದ್ದಾರೂಢ ಸ್ವಾಮಿಯವರ ಮಠದ ವತಿಯಿಂದ ಡಿ.22ರಿಂದ ಆರಂಭಗೊಂಡಿರುವ ಜಗದ್ಗುರು ಶ್ರೀ ಸಿದ್ಧಾರೂಢ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸಿತು. ನಗರದ ಹೊಸಸೇತುವೆ ರಸ್ತೆಯ ಶ್ರೀ ಸಿದ್ದಾರೂಢ ಆಶ್ರಮದ ವತಿಯಿಂದ ಭಕ್ತರು ಪೂರ್ಣಕುಂಭ ಸ್ವಾಗ ದೊಂದಿಗೆ ಜ್ಯೋತಿ ರಥಯಾತ್ರೆಯನ್ನು ಶ್ರೀ ಶಿವಲಿಂಗಾ ನಂದ ಸ್ವಾಮಿಗಳ ನೇತೃತ್ವದಲ್ಲಿ ಬರಮಾಡಿ ಕೊಂಡರು. 


ಟ್ರಸ್ಟ್ ಕಾರ್ಯದರ್ಶಿ ರಾಮಮೂರ್ತಿ, ಬಿ. ದಿವಾಕರ್ ಶೆಟ್ಟಿ, ಮಾರುತಿ, ರಂಗನಾಥ್ ಗಿರಿ, ಬಾಬು, ವಿಜಯ್ ಕುಮಾರ್, ಜಿ.ಧರ್ಮ ಪ್ರಸಾದ್, ಮಂಜುನಾಥ್ ರಾವ್, ಹನುಮಂತಪ್ಪ ಎರೇಸೀಮೆ, ಭಾರತಮ್ಮ, ಲಕ್ಷ್ಮಣಪ್ಪ ಮುಂತಾದವರು ಉಪಸ್ಥಿತರಿದ್ದರು.


ಭದ್ರಾವತಿ ನಗರದ ವಿವಿದೆಡೆ ಸಂಚರಿಸಿ ಶ್ರೀ ಮಠದ ಆವರಣದಲ್ಲಿ ವಾಸ್ತವ್ಯ ಹೂಡಿದ ರಥಯಾತ್ರೆ ಮಂಗಳವಾರ ಶಿವಮೊಗ್ಗಕ್ಕೆ ಪ್ರಯಾಣಬೆಳೆಸಿತು. ಸಿದ್ಧಾರೂಢ ಮಠದಲ್ಲಿ ಸಂಜೆ ಏರ್ಪಡಿಸಿದ್ದ ಹುಣ್ಣಿಮೆ ಕಾರ್ಯಕ್ರಮ ದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮಿಜಿ ಉಪನ್ಯಾಸ ಆಶೀರ್ವಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು