ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆಯ ಅರಿವನ್ನು ಮುಂದಿನ ಪೀಳಿಗೆಗೆ ಹಬ್ಬಗಳ ವಿಶೇಷತೆ, ಆಹಾರ ಕ್ರಮ ಉಡುಗೆ-ತೊಡುಗೆಗಳನ್ನು ಪರಿಚಯಿಸಿ ದಂತಾಗುತ್ತದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ಪರಿಸರ ಹೇಳಿದರು.
ಮಕರ ಸಂಕ್ರಾಂತಿ ಪ್ರಯುಕ್ತ ವಿನೋಬ ನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಿದ್ದ ರಾಯಲ್ ಸುಗ್ಗಿ ಸಂಭ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮಾತನಾಡಿ, ಮಕ್ಕಳಿಗೆ ಭತ್ತದ ರಾಶಿ, ಕಬ್ಬುಗಳು ಹಾಗೂ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳು, ಎಳ್ಳು ಬೆಲ್ಲ ಹಾಗೂ ಸುಗ್ಗಿಯ ಮಹತ್ವದ ಅರಿವು ಮಕ್ಕಳಿಗೆ ತಿಳಿಸುವುದು ವಿಶೇಷ ಎಂದರು.
ಶಾಲೆ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ ಮಾತನಾಡಿ, ಶಾಲೆಯ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹಬ್ಬದ ಉತ್ಸವದಲ್ಲಿ ಭಾಗವಹಿಸಿದ್ದು ಸಂತಸ ಎಂದರು.ಕನ್ನಡ ಶಿಕ್ಷಕ ಅರುಣ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಶ ಅಮೋಘ, ಮುಖ್ಯ ಶಿಕ್ಷಕ ವಿನಯ್ ಎಸ್, ಶಿಕ್ಷಕರಾದ ಸೋನಿಕ, ವಿಂದ್ಯಾ,ಪಲ್ಲವಿ, ರವಿಕುಮಾರ್, ಭಾಗ್ಯಲಕ್ಷ್ಮಿ, ಸುನಿತ ಇನ್ನಿತರರು ಹಾಗೂ ಪೋಷಕರು ಭಾಗವಹಿಸಿದ್ದರು.