ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-24 ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾನು- ತರಕಾರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಮಾತನಾಡಿ ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ, ಮಲೆನಾಡಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಜನಸೇವೆ ಯಲ್ಲಿ ನಿರತವಾಗಿದೆ, ವಸತಿ ಸೌಕರ್ಯ ಹೊಂದಿರುವ ಈ ಅಂಧರ ಸಂಗೀತ ಶಾಲೆಯಲ್ಲಿ ಅನೇಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ, ಅದಕ್ಕೆ ಸಂಗೀತ ದೇವರೆಂದೇ ಪ್ರಸಿದ್ದಿ ಯಾಗಿರುವ ಶ್ರೀ ಪುಟ್ಟರಾಜ ಗವಾಯಿ ಗಳ ಕೃಪಾಕಟಾಕ್ಷವೇ ಸಾಕ್ಷೀಯಾಗಿದೆ, ಇಲ್ಲಿ ಕೂಡ ಯಾವ ನೀರಿಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಕಲಾವಿದ ರನ್ನಾಗಿ ರೂಪುಗೊಳಿಸಿ ಸಾರಸ್ವತಾ ಲೋಕದಲ್ಲಿ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ಐಪಿಪಿ.ಜೆಸಿ ಸೌಮ್ಯ ಅರಳಪ್ಪನವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಇಲ್ಲಿ ಸೇರ್ಪಡೆಯಾಗಿ ಉಚಿತವಾಗಿ ಸಂಗೀತ ಅಭ್ಯಾಸಿಗಳಾಗಿ ಭಕ್ತಿ ಶ್ರದ್ಧೆ ಹೊಂದಿರುವುದಕ್ಕೆ ಇಲ್ಲಿನ ಸಂಗೀತಮಯದ ವಾತಾವರಣವೇ ಕಾರಣವಾಗಿದೆ, ಭಗವಂತನ ಸೃಷ್ಟಿ ಯಲ್ಲಿ ಹುಟ್ಟು ಅಂಗವಿಕಲತೆ, ಅಂಧ ರಾಗಿರುವ ಮಕ್ಕಳು, ವಯಸ್ಕರು, ಸಂಗೀತ ಶಾಲೆಯಲ್ಲಿ ಆತ್ಮರಾಗವನ್ನು ಕಲಿತು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವುದು ಇಂದಿನ ರಿಯಾಲಿಟಿ ಶೋ ಗಳಲ್ಲಿ ನಾವು ನೋಡಿದ್ದೇವೆ ಈ ಸಂಸ್ಥೆಯಿಂದಲು ಸ್ಪರ್ಧಿಗಳಾಗಿರುವುದು ದರ್ಶಿಸಿದ್ದೇವೆ ಎನ್ನುವುದಕ್ಕೆ ಶ್ರೀ ಗಳ ಅಂತರ್ಮುಖಿ ಆಶೀರ್ವಾದವೇ ಕಾರಣ ಎನ್ನಬಹುದು ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ. ಸ್ಮಿತಾ ಮೋಹನ್, ಜೆಸಿ.ಗಾರಾ. ಶ್ರೀನಿವಾಸ್, ಜೆಸಿ.ಪರಮೇಶ್ವರ, ಜೆಸಿ.ದಿವ್ಯಾ ಪ್ರವೀಣ್, ಜೆಸಿ.ಸ್ವಪ್ನ ಸಂತೋಷ್ ಗೌಡ, ಜೆಸಿ.ಚಿರಂಜೀವಿ ಬಾಬು, ಜೆಸಿ.ಚಂದ್ರಹಾಸ್ ಎನ್ ರಾಯ್ಕರ್, ಜೆಸಿ.ಮಂಜುನಾಥ್, ಜೆಸಿ.ಸಂದೇಶ್ ಸೇರಿದಂತೆ ಸಂಗೀತ ಶಾಲೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ವಿಜಯ ಸಂಘರ್ಷ ಶಿವಮೊಗ್ಗ : ಜೆಸಿಐ-ಇಂಡಿಯಾ ಹಾಗೂ ಜೋನ್-24 ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾ…

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಕ್ರೈಸ್ತ ಧರ್ಮಗುರುಗಳಿಂದ ಸಾಮೂಹಿಕ ಪ್ರಾರ್ಥನೆ

ವಿಜಯ ಸಂಘರ್ಷ ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರ ದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬ…

ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿದ ನವ ವಿವಾಹಿತೆ ಸಾವು ಕಂಡಿದ್ದಾಳೆ. ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ಅನಿತಾ (20) ಮೃತ ದುರ್ದೈವಿಯಾಗಿದ್ದಾಳೆ. ಪಟ್ಟಣ ಸಮೀಪದ ಯಡೆಹಳ್ಳಿಯ ಸಂತೋಷ ಎಂಬಾತ 7 ತಿಂಗಳ ಹಿಂದೆ ಅದೇ ಯಡೇಹಳ್ಳಿ ಕ್ಯಾಂಪಿನ ನಿವಾಸಿ ಯಾದ ಯುವತಿ ಅನಿತಾಳನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ವಾಗಿತ್ತು. ಪ್ರೀತಿಗೆ ಅನಿತಾಳ ಮನೆಯ ವರ ವಿರೋದ್ಧವಿತ್ತು. ಶುಕ್ರವಾರ ತಡರಾತ್ರಿ ಸಂತೋಷನ ಮನೆಯವರು ಯುವತಿಯ ತಂದೆ ಮಾಣಿಕಪ್ಪನ ಮೊಬೈಲ್‌ಗೆ ಕರೆ ಮಾಡಿ ಮಗಳು ಅನಿತಾ ಆರೋಗ್ಯ ಸರಿ ಇಲ್ಲ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವೆ ಎಂದು ಹೇಳಿದ್ದಾರೆ. ಮಾಣಿಕಪ್ಪ ತನ್ನ ಸಂಬಂದಿಯಾದ ಶಿವುನನ್ನು ಸಂತೋಷನ ಆಸ್ಪತ್ರೆಗೆ ಕಳಿಸಿ ಅನಿತಾಳ ಆರೋಗ್ಯ ವಿಚಾರಿಸಿ ಕೊಂಡು ಬರುವಂತೆ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದ ಸಂಬಂದಿ ಶಿವು ಮಾಣಿಕಪ್ಪನಿಗೆ ಕರೆ ಮಾಡಿ ಅನಿತಾ ಸಾವು ಕಂಡಿದ್ದಾಳೆ ಎಂದು ತಿಳಿಸಿದ್ದಾನೆ. 7 ತಿಂಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ ಅನಿತಾಳ ಸಾವು ಅನು ಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಾಣಿಕಪ್ಪನ ಕಡೆಯವರು ಸಂತೋಷ ನ ಮನೆಯ ಮುಂದೆ ಜಗಳ ಮಾಡಿ ದ್ದಾರೆ. ಜಗಳ ವಿಕೋಪಕ್ಕೆ ತಿರುಗು ವುದರ ಸೂಕ್ಷö್ಮತೆ ತಿಳಿದ ಹೊಳೆ ಹೊನ್ನೂರು ಪೊಲೀಸರು ಪರಿಸ್ಥಿತಿ ಯನ್ನು ಹತೋಟಿಗೆ ತಂದಿದ್ದಾರೆ. ಅನಿತಾಳ ತಂದೆ ಮಾಣಿಕಪ್ಪ ಅಳಿಯ ಸಂತೋಷನ ಕುಟುಂಬಸ್ಥರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸರು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ವಿಜಯ ಸಂಘರ್ಷ ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿ…

ಈಜಲು ಹೋದ ಬಾಲಕಿ ನೀರುಪಾಲು...!

ವಿಜಯ ಸಂಘರ್ಷ ಭದ್ರಾವತಿ: ತಾಲ್ಲೂಕಿನ ಕಾಳನಕಟ್ಟೆ ಯಲ್ಲಿ ಭದ್ರಾ ನದಿಯ ಚಾನೆಲ್ ನೀರಿನಲ್ಲಿ ನೋಡಲು ಹೋದ ಬಾಲಕಿ ನೀ…

ಹೋಳಿ..ಬನ್ನಿ

ವಿಜಯ ಸಂಘರ್ಷ ಬನ್ನಿ ಬಂಧುವೆ ಹೋಳಿ ಹಬ್ಬವಿದೆ ಇಕೋ ಬಣ್ಣದ ಜೊತೆಗೆ..  ಇಲ್ಲಿ ಎಲ್ಲಿದೆ ಜಾತಿ ಸಂಕೋಲೆ ಕಟ್ಟಳೆ ಇಲ…

ತರಾತುರಿಯಲ್ಲಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಮುಂದಾದ ಬಿಎಸ್ ವೈ ಪುತ್ರರು: ಹುಲ್ಮಾರ್ ಮಹೇಶ್ ಆಕ್ರೋಶ

ವಿಜಯ ಸಂಘರ್ಷ ಶಿಕಾರಿಪುರ: ಪಟ್ಟಣದ ವಿವಿಧ ವೃತ್ತ ಗಳಲ್ಲಿ ಅಕ್ಕಮಹಾದೇವಿ, ಬಸವೇಶ್ವರ, ಅಂಬೇಡ್ಕರ್, ಸಂಗೊಳ್ಳಿ ರಾ…

ಭದ್ರಾವತಿಯ ದುಃಸ್ಥಿತಿ....?

ವಿಜಯ ಸಂಘರ್ಷ ಬದುಕು ನಂಬಿ ಬಂದವರಿಗೆಲ್ಲ ಬದುಕು ಕೊಟ್ಟಿದ್ದು ಭದ್ರಾವತಿ ಆಶ್ರಯ ಬಯಸಿ ಬಂದವರಿಗೆಲ್ಲ ಆಶ್ರಯ ನೀಡಿ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ